Salmi 124

Se il Signore non fosse stato per noi

1ಯಾತ್ರಾಗೀತೆ; ದಾವೀದನದು. “ಯೆಹೋವನು ನಮಗಿಲ್ಲದಿದ್ದರೆ ನಮ್ಮ ಗತಿ ಏನಾಗುತ್ತಿತ್ತು?”, ಎಂದು ಇಸ್ರಾಯೇಲರೇ ಹೇಳಲಿ. 2ನರ ಮನುಷ್ಯರು ನಮಗೆ ವಿರುದ್ಧವಾಗಿ ಎದ್ದಾಗ, ಯೆಹೋವನು ನಮಗಿಲ್ಲದಿದ್ದರೆ, 3“ನಿಶ್ಚಯವಾಗಿ ಅವರು ಕೋಪದಿಂದ ಉರಿಗೊಂಡು, ನಮ್ಮನ್ನು ಜೀವಸಹಿತ ನುಂಗಿಬಿಡುತ್ತಿದ್ದರು; 4ನಿಶ್ಚಯವಾಗಿ ಪ್ರವಾಹವು ನಮ್ಮನ್ನು ಬಡಿದುಕೊಂಡು ಹೋಗುತ್ತಿತ್ತು; ನದಿಯು ನಮ್ಮನ್ನು ಕೊಚ್ಚಿಕೊಂಡು ಹೋಗುತ್ತಿತ್ತು; 5ಮೀರಿದ ಪ್ರವಾಹವು ನಮ್ಮನ್ನು ಮುಳುಗಿಸಿಬಿಡುತ್ತಿತ್ತು.” 6ಯೆಹೋವನಿಗೆ ಕೊಂಡಾಟವಾಗಲಿ; ಆತನು ನಮ್ಮನ್ನು ಅವರ ಹಲ್ಲುಗಳಿಗೆ ಸೀಳಿಬಿಡಲು ಕೊಡಲಿಲ್ಲ.

7ನಮ್ಮ ಜೀವವು ಬೇಟೆಗಾರನ ಬಲೆಯಿಂದ ತಪ್ಪಿಸಿಕೊಂಡ ಪಕ್ಷಿಯಂತಿದೆ; ಬಲೆಯು ಹರಿದುಹೋಯಿತು, ನಾವು ತಪ್ಪಿಸಿಕೊಂಡೆವು. 8ಭೂಮಿ, ಆಕಾಶಗಳನ್ನು ಉಂಟುಮಾಡಿದ, ಯೆಹೋವನ ನಾಮದಲ್ಲಿ ನಮಗೆ ರಕ್ಷಣೆಯಾಗುವುದು.

Copiato!
Aa