Psalms 87
All my springs are in you
1ಕೋರಹೀಯರ ಕೀರ್ತನೆ; ಗೀತೆ. ಯೆಹೋವನು ಸ್ಥಾಪಿಸಿದ ಪಟ್ಟಣವು ಪರಿಶುದ್ಧ ಪರ್ವತದ ಮೇಲಿದೆ. 2ಆತನು ಯಾಕೋಬ್ ವಂಶದವರ ಎಲ್ಲಾ ನಿವಾಸಗಳಿಗಿಂತ, ಚೀಯೋನಿನ ದ್ವಾರಗಳನ್ನು ಹೆಚ್ಚಾಗಿ ಪ್ರೀತಿಸುತ್ತಾನೆ. 3ದೇವನಗರವೇ, ನಿನ್ನ ವಿಷಯವಾದ ಗೌರವೋಕ್ತಿಯೇನೆಂದರೆ, 4“ರಹಬ, ಬಾಬೆಲ್ ದೇಶಗಳವರನ್ನು, ನನ್ನನ್ನು ಬಲ್ಲವರಲ್ಲಿ ಎಣಿಸುವೆನು. ಇಗೋ ಫಿಲಿಷ್ಟಿಯ, ತೂರ್, ಕೂಷ್, ಜನಾಂಗಗಳು ಅಲ್ಲೇ ಹುಟ್ಟಿದವು” ಎಂಬುದೇ.
5ಇದರಿಂದ ಚೀಯೋನೇ ಪ್ರತಿಯೊಂದು ಜನಾಂಗದ ಜನ್ಮನಗರವೆಂದು ಹೇಳಲ್ಪಡುವುದು; ಅದನ್ನು ಪರಾತ್ಪರನಾದ ದೇವರು ತಾನೇ ಸ್ಥಿರಪಡಿಸುವನು. 6ಯೆಹೋವನು ಜನಾಂಗಗಳ ಪಟ್ಟಿಯನ್ನು ಮಾಡುವಾಗ, “ಪ್ರತಿಯೊಂದರ ವಿಷಯ ಇದು ಅಲ್ಲಿಯೇ ಹುಟ್ಟಿದ್ದು” ಎಂದು ಬರೆಯುವನು. ಸೆಲಾ 7ಇವರು ಹಾಡುತ್ತಾ, ಕುಣಿಯುತ್ತಾ, “ನನ್ನ ಜೀವಜಲದ ಒರತೆಗಳೆಲ್ಲಾ ನಿನ್ನಲ್ಲಿಯೇ ಇವೆ” ಎಂದು ಹೇಳುವರು.
Copied!
Aa